ವೆಬ್ ಸ್ಟೋರೀಸ್
'ಟಾಕ್ಸಿಕ್' ಬ್ಯೂಟಿ ಕಿಯಾರಾ...
'ಟಾಕ್ಸಿಕ್' ಬ್ಯೂಟಿ ಕಿಯಾರಾ...
12ನೇ ಆವೃತ್ತಿಯ ಜೆಕ್ಯೂ ಮೋಸ್ಟ್ ಇನ್ಫ್ಲ್ಯುಯೆನ್ಶಿಯಲ್ ಯಂಗ್ ಇಂಡಿಯನ್ ಆವೃತ್ತಿಯಲ್ಲಿ ಕಿಯಾರ ಅಡ್ವಾಣಿ ಭಾಗಿಯಾಗಿದ್ದರು. ದಪ್ಪ ಚರ್ಮದ ಕಾರ್ಸೆಟ್ ಟಾಪ್ ಅನ್ನು ಇಲ್ಯೂಷನ್ ಪೆನ್ಸಿಲ್ ಸ್ಕರ್ಟ್ ಧರಿಸಿದ್ದರು. ಸಿಂಪಲ್ ಮೇಕಪ್, ಸಣ್ಣ ಕುತ್ತಿಗೆಯ ಚೈನ್ನಲ್ಲಿ ಅವರ ಲುಕ್ ಸ್ಟನ್ನಿಂಗ್ ಆಗಿದೆ.
ಎಂಥಾ ಚೆಂದಾನೋ ಇವಳು..
ಜೆಕ್ಯೂನಲ್ಲಿ ಧರಿಸಿದ್ದ ಕಾಸ್ಟ್ಯೂಮ್ನೊಂದಿಗೆ ಕಿಯಾರಾ ಅಡ್ವಾಣಿ ಫೋಟೋ ಶೂಟ್ ಮಾಡಿಸಿದ್ದಾರೆ. ಆಕೆಯ ಟಾಕ್ಸಿಕ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದು, ಯಾಕಿಷ್ಟು ಸುಂದರ ನೀವು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಫ್ಯೂಗ್ಲಿ ಮೂಲಕ ಸಿನಮಾಕ್ಕೆ ಎಂಟ್ರಿ
ಕಿಯಾರಾ ಅವರು2014ರಲ್ಲಿ ಫ್ಯೂಗ್ಲಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಎಂಎಸ್ ಧೋಣಿ ಅನ್ಟೋಲ್ಡ್ ಸಿನಿಮಾ ಅವರಿಗೆ ಖ್ಯಾತಿಯನ್ನು ಕೊಟ್ಟಿತ್ತು. ಭರತ್ ಅನೆ ನೇನು ಮೂಲಕ ಅವರು ಟಾಲಿವುಡ್ ಸಿನಿಮಾಗೆ ಕಾಲಿಟ್ಟರು. ಕಬೀರ್ ಸಿಂಗ್ನಲ್ಲಿ ಅವರ ಮೃದು ಸ್ವಭಾವದ ಪಾತ್ರಕ್ಕೆ ಪ್ರೇಮಿಗಳು ಮನಸೋತಿದ್ದರು.
ಟಾಕ್ಸಿಕ್ ಹುಡ್ಗಿ ಕಿಯಾರಾ
ಕಿಯಾರಾ ಅಡ್ವಾಣಿ ಅವರ ಟಾಕ್ಸಿಕ್ ಸಿನಿಮಾ ಇನ್ನೇನು ರಿಲೀಸ್ ಆಗುವ ಹಂತದಲ್ಲಿದೆ. ಇದ್ರಲ್ಲಿ ಅವರ ಪಾತ್ರ ನಾಡಿಯಾ ಎಂದು. ಈ ಪಾತ್ರದ ಕತೆ ಯೂನಿಕ್ ಕ್ಯಾರೆಕ್ಟರ್ ತುಂಬಾನೆ ಇಷ್ಟವಾಗಿದೆ ಎಂದು ಸಂದರ್ಶನದಲ್ಲಿ ಕಿಯಾರ ಹೇಳಿಕೊಂಡಿದ್ದಾರೆ.
'ನಾಡಿಯಾ'ಗೆ ಸಿಕ್ಕ ಪ್ರಶಸ್ತಿ ಇದು
ಕಿಯಾರಾಗೆ ಗುಡ್ ನ್ಯೂಸ್ ಸಿನಿಮಾಗಾಗಿ ಫಿಲ್ಮ್ ಫೇರ್ನಲ್ಲಿ ಬೆಸ್ಟ್ ಸಪೋರ್ಟಿಂಗ್ ಕ್ಯಾರೆಕ್ಟರ್ ಪ್ರಶಸ್ತಿ ಸಿಕ್ಕಿತ್ತು. 2024 ಮತ್ತು 2022ರಲ್ಲಿ ಶೇರ್ ಷಾ ಮತ್ತು ಬೆಸ್ಟ್ ಆಕ್ಟರ್ ಅವಾರ್ಡ್ಗೆ ನಾಮಿನೇಟ್ ಆಗಿದ್ದರು. ಫ್ಯೂಗ್ಲಿಗೆ ಅತ್ಯುತ್ತಮ ಪ್ರವೇಶ, ಕಬೀರ್ ಸಿಂಗ್ಗೆ ಹೆಚ್ಚು ಹಣ ಗಳಿಸಿದ ನಟಿ ಮತ್ತು ಸ್ಮಿತಾ ಪಾಟೀಲ್ ಪ್ರಶಸ್ತಿ ಪಡೆದುಕೊಂಡಿದ್ದರು.
ಸಿದ್ಧಾರ್ಥ್ ಜೊತೆ ದಾಂಪತ್ಯ
ಶೇರ್ ಷಾ ಸಿನಿಮಾದ ಮೂಲಕ ಸಿದ್ಧಾರ್ಥ್ ಮಲ್ಹೋತ್ರ ಜೊತೆ ನಟಿಸಿದ ಅವರು, ಪ್ರೀತಿಯಲ್ಲಿ ಬಿದ್ದರು. 2020ರಿಂದಲೂ ಇಬ್ಬರು ಒಟ್ಟಾಗಿ ಡೇಟಿಂಗ್ನಲ್ಲಿದ್ದ ಬಗ್ಗೆ ಸುದ್ದಿ ಹರಡಿತ್ತು.2023ರಲ್ಲಿ ರಾಜಸ್ಥಾನದ ಜೈಸಲ್ಮೇರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಅವರಿಗೆ ಸಾರಾಯಾ ಎಂಬ ಮಗಳಿದ್ದಾಳೆ.
ಜಂಭದ ಕೋಳಿನಾ ಕಿಯಾರಾ?
ಬಾಲಿವುಡ್ ಇನ್ಫ್ಲ್ಯುಯೆನ್ಸರ್ ಒಬ್ಬರು ಕಿಯಾರ ವಿರುದ್ಧ ಕೆಲವು ತಿಂಗಳ ಹಿಂದೆ ಆರೋಪವೊಂದನ್ನು ಮಾಡಿದ್ದರು. ಸತ್ಯ ಪ್ರೇಮ್ ಕಿ ಕಥಾ ಸಿನಿಮಾದ ನಂತರ ಫ್ಲೈಟ್ನಲ್ಲಿ ಇನ್ಫ್ಲ್ಯುಯೆನ್ಸ್ ಪ್ರಯಾಣಿಸುತ್ತಿದ್ದಾಗ ಅವರ ತಾಯಿ ಮಿಸ್ ಆಗಿ ಕಿಯಾರಾಗೆ ಮೀಸಲಿದ್ದ ಸೀಟ್ನಲ್ಲಿ ಕುಳಿತಿದ್ದರಂತೆ ಆಗ ಕಿಯಾರಾ ನಡೆದುಕೊಂಡ ರೀತಿ ನೆನಪಿದೆ ಅವರು ಜಂಭದ ಕೋಳಿ ಎಂದು ಆರೋಪಿಸಿದ್ದರು.

_1777102030724.webp?w=480&auto=format%2Ccompress&fit=max)